ಈ ಶೈಶವ ಈ ಬಾಲ್ಯ ಈ ಹರೆಯ ಈ ಮುಪ್ಪು
ಈ ಹುಟ್ಟು ಸಾವ ನಡುವೆ
ಈ ಕಾಮ ಈ ಕ್ರೋಧ ಈ ಲೋಭ ಈ ಮೋಹ
ಮದ ಮತ್ಸರಗಳ ಗೊಡವೆ
ಕೋಶಗಳ ಓದಿದರು ದೇಶಗಳ ಸುತ್ತಿದರು
ಪ್ರಶ್ನೆಗೆ ಇಲ್ಲ ಜವಾಬು
ಇದು ಸತ್ಯ ಇದು ಮಿಥ್ಯ ಇದು ನೇರ ಇದು ವಕ್ರ
ಬರಿದೆ ಸುಳ್ಳು ಸಬೂಬು
ಹೊಸತಿನ ಹುಡುಕಾಟದ ಭ್ರಮೆ ಬಲಗೊಂಡು ಬೆಳೆದಿರಲು
ವಾಸ್ತವದ ನೆಲೆಯ ಮರೆತು
ಅದೆ ಚಲನೆ ಅದೆ ತುಲನೆ ಬಿಡದಂತೆ ಸೆಳೆದಿಹುದು
ಪೂರ್ವಿಕರ ಹೆಜ್ಜೆ ಗುರುತು
ಬಹುಪಾಲು ಬದುಕನ್ನು ಕಡುನಿದ್ದೆ ನುಂಗಿರಲು
ಉಳಿದದ್ದು ಜಡತೆ ಪಾಲು
ದುಡಿಯುವುದು ಉಣ್ಣುವುದು ಉಣ್ಣುವುದು ದುಡಿಯುವುದು
ಬೇಕೆ ಯಾಂತ್ರಿಕತೆಯ ಬಾಳು
ಕತ್ತಲೆಯ ಮೇರೆಗಳು ನಡೆದಷ್ಟು ವಿಸ್ತಾರ
ಎಲ್ಲಿರುವುದು ಹೊಸಬೆಳಕು
ಹೃದಯದ ಸದ್ಗುಹೆಯೊಳಗೆ ತಪಗೈವ ಪರಮಾತ್ಮ
ಮಾತಾಡು ಮೌನ ಸಾಕು
super guru
ಪ್ರತ್ಯುತ್ತರಅಳಿಸಿನಿಜವಾಗಿಯೂ ಅತ್ಮದಳೊಗಿಹ ಪರಮಾತ್ಮ ಮಾತಾಡ್ಬೆಕು
ಈ ಗಾಳಿ ಈ ಬೆಳಕು
ಪ್ರತ್ಯುತ್ತರಅಳಿಸಿಈ ನೀರು ಈ ಭೂಮಿ
ಪರಿಶುದ್ಧ ಸತ್ಯ
ಈ ನೀತಿ ಈ ಬದುಕು
ಈ ರೀತಿ ಈ ರಿವಾಜು
ಜವಾಬಿಲ್ಲದ ಸತ್ಯ..
ಬರಿ ಭ್ರಮೆಯು
ಕರೆ ಬದುಕು
ಸುಳ್ಳು ತಟವಟಗಳ ತಾಕಲಾಟ
ಇದೆ ನಿತ್ಯ
ಇದೆ ಸತ್ಯ
ಉಳಿದುದೆಲ್ಲ ಮಿಥ್ಯ ..
ವಂದನೆಗಳೊಂದಿಗೆ..