ಹಸಿರು ಗಿರಿಯ ತಪ್ಪಲಲ್ಲಿ
ನಿಂತ ಬಿದಿರ ಬೊಂಬಿಗೆ
ಕೃಷ್ಣ ಬಂದೆ ಬರುವನೆಂಬ
ದಟ್ಟವಾದ ನಂಬುಗೆ
ಗೋವುಗಳನು ಮೇಯ ಬಿಟ್ಟು
ನೋಡದಿರನು ತನ್ನನು
ಸನಿಹ ಬಂದು ಒಲವ ಬೆರೆಸಿ
ಮಾಡದಿರನು ಕೊಳಲನು
ಊದಿ ಗೋವುಗಳನು ಕೂಗಿ
ಮಾಡಿಕೊಡುವ ಪರಿಚಯ
ನೆಗೆದು ಬರುವ ಕರುಗಳಲ್ಲಿ
ಥೇಟು ಅವನ ಅಭಿನಯ
ರಾತ್ರಿ ರಾಧೆ ತೊಡೆಗೆ ಒರಗಿ
ಹರಿಸದಿರನು ನಾದವ
ಅವಳ ನಿದಿರೆ ಕೆಡಿಸಬಲ್ಲ
ಮೋಡಿಗಾರ ಮಾಧವ
bareda kayige chinnada kadGa bekallava?????
ಪ್ರತ್ಯುತ್ತರಅಳಿಸಿ