ಗುರುವಾರ, ಸೆಪ್ಟೆಂಬರ್ 30, 2010

ಅಯೋಧ್ಯ

ಭಾರತಾಂಬೆಯ ಅಯೋಧ್ಯ
ಯುದ್ಧ ಭೂಮಿಯಲ್ಲ,
ಧರ್ಮಕಿಂತ ದೇಶ ಮುಖ್ಯ
ಬದ್ಧರಾಗಿ ಎಲ್ಲ.

ರಾಮನೊಡನೆ ಕುಳಿತು ಊಟ
ಮಾಡಿದವರು ಇಲ್ಲ,
ಅಲ್ಲನೊಡನೆ ಮಸೀದಿಯಲಿ
ಆಡಿದವರು ಇಲ್ಲ.

ಇಟ್ಟ ಹಣೆಯ ತಿಲಕ ಕರಗಿ
ಹೋಗುವಂಥ ಬಣ್ಣ,
ಬಿಟ್ಟ ಗಡ್ಡ ಬಿಳಿಯ ಟೋಪಿ
ತಂದು ಕೊಡವು ಅನ್ನ.

ಶ್ಲೋಕಕಿಂತ ಬಾಳ್ವೆ ಮುಖ್ಯ
ದುಡಿಮೆಯೊಂದೆ ದೈವ,
ಕೂಗುವ ನಮಾಜಿಗಿಂತ
ಮಿಗಿಲು ಭ್ರಾತೃ ಭಾವ.

ಶಾಂತಿಯ ಬುನಾದಿ ಮೇಲೆ
ಕಟ್ಟಬೇಕು ರಾಜ್ಯ,
ಕ್ರಾಂತಿಯಿಂದ ನಿನ್ನ ಪತನ
ಬೇಡ ವ್ಯರ್ಥ ವ್ಯಾಜ್ಯ.

ಕರಗಿ ಹೋಗೊ ಹಿಮದ ಹಾಗೆ
ನಿನ್ನ ಪುಟ್ಟ ಬದುಕು,
ಕರಗೊ ಮುನ್ನ ನಿನ್ನ ಒಳಗೆ
ನೀನೆ ನಿನ್ನ ಹುಡುಕು.

11 ಕಾಮೆಂಟ್‌ಗಳು:

  1. ಮುತ್ತಿನ೦ಥ ಮಾತುಗಳು ಶಿವಾ! ದೇಶದುದ್ಧಗಲಕ್ಕೂ ಕಿಚ್ಚು ಹತ್ತಿರುವ ಈ ಸಮಯದಲ್ಲಿ ಬಹಳ ಅರ್ಥಪೂರ್ಣ ಕವನ.

    ಪ್ರತ್ಯುತ್ತರಅಳಿಸಿ
  2. Very nice bro, ee kavite odi iday na namma Hrudaya Shiva adaay Satya is in Love matte Tata Birla ge haadu bardiroru annistu... I liked it kanri...

    ಪ್ರತ್ಯುತ್ತರಅಳಿಸಿ
  3. ನಮಸ್ತೆ,

    Arthapoornavaada kavi saalugalu. sogasaagide kavithe mattu bhava.

    Omme kannadisi

    "ಹಸಿವು ಬದುಕಿನ ಪಾಟ ಕಲಿಸುತ್ತವೆ, ಕಷ್ಟಗಳು ಸಾಧನೆಗೆ ಮುನ್ನುಡಿ ಹಾಡುತ್ತವೆ". Visit this blog to read. vishwamuki.blogspot.com

    ಪ್ರತ್ಯುತ್ತರಅಳಿಸಿ
  4. ಕಿಚ್ಚು ಕೆಟ್ಟದನ್ನು ದಹನ ಮಾಡಲು ಹಚ್ಚಬೇಕೆ ವಿನಃ ಶಾಂತಿ ಕದಡಲು ಖಂಡಿತ ಹಚ್ಚಬಾರದು ಮಂಜು ಅವ್ರೆ .

    ಪ್ರತ್ಯುತ್ತರಅಳಿಸಿ
  5. ಹಾಗೆ ಅನ್ನಿಸಿದ್ದರ ಹಿನ್ನೆಲೆ ತಿಳಿದುಕೊಳ್ಳಬಹುದೇ ಪಿ.ಡಿ ಯವರೇ ?

    ಪ್ರತ್ಯುತ್ತರಅಳಿಸಿ
  6. ಓದುಗ ಮತ್ತು ಬರಹಗಾರ ಮುನ್ನುಡಿ ಮತ್ತು ಬೆನ್ನುಡಿ ಇದ್ದ ಹಾಗೆ.ಇವರಿಬ್ಬರ ನಡುವೆ ಸಾಹಿತ್ಯ ವಾಹಿನಿಯಾಗಿ ಕೆಲಸ ನಿರ್ವಹಿಸುತ್ತದೆ..ಖಂಡಿತ ನಿಮ್ಮ ಭಾವನೆಗಳನ್ನು ಓದುತ್ತೇನೆ ಚುಕ್ಕಿ.

    ಪ್ರತ್ಯುತ್ತರಅಳಿಸಿ
  7. ಶಿವಣ್ಣ
    ಈ ವಿಷಯ ದಲ್ಲಿ ದೇವರ ತಪ್ಪಿಲ್ಲ !!
    ದೇವರ ಹೆಸರಲ್ಲಿ ದೊಡೆದಾಡಿ ಕೊಳ್ಳುವ ಜನ ಶತ ಡಡ್ಡರು
    ಜಾಣತೋಳ ಟಗರುಗಳನ್ನು ಜಗಳವಾಡಲು ಬಿಟ್ಟು ನೆತ್ತರ ನೆಕ್ಕುವ ಹಾಗೆ ! ಯಾವುದು ಸತ್ತರೂ ಲಾಭ ತೋಳಕ್ಕೆ ತಾನೇ

    ಪ್ರತ್ಯುತ್ತರಅಳಿಸಿ
  8. Ee kaviteya koneya 4 saalugalalli devara astitwa ellide annuva prashnege uttara kandukollalondu upaaya sigabahudu aviveki dharmaandharige...

    ಪ್ರತ್ಯುತ್ತರಅಳಿಸಿ