ಸಿದ್ದಕ್ಕ : ಪರ್ವಾಗಿಲ್ಲ ಪಾರಕ್ಕ
ಕ್ವಾಣೆ ವಳಕ್ ಬಾರಕ್ಕ
ನಾವೂನು ನಿಮ್ ಜನಾನೆ !
ಪಾರಕ್ಕ: ನೀ ಸುಮ್ಮನಿರು ಸಿದ್ದಕ್ಕ
ಗಮ್ಮನ್ನೋದೇನಕ್ಕ
ಏನ್ ಅಡುಗ್ಯೋ ಏನೋ ಕಾಣೆ !
ಸಿದ್ದಕ್ಕ : ಉಳ್ಳೀ ಕಾಳುರ್ದಿವ್ನಿ
ಮೆಣಸೇ ಕಾಯರ್ದಿವ್ನಿ
ಇಟ್ನೆಸ್ರೂದು ಮಡ್ಕೆ ಮಡಗಿವ್ನಿ
ನಿಮ್ಮಟ್ಟಿಲ್ ಏನೆಸ್ರು ಯೋಳು ನೀ ?
ಪಾರಕ್ಕ: ಗದ್ದೆ ಏರಿ ಮ್ಯಾಲೆ
ಇದ್ದ ಅಣ್ಣೆ ಸೊಪ್ಪು
ಎರ್ಡೇ ಎರಡೀರುಳ್ಳಿ ಎರಡಳ್ಳುಪ್ಪು
ಇದ್ದುದ್ದೇ ಬಕ್ಕ ನಾ ಏನೇಳ್ಳಿ !
ಸಿದ್ದಕ್ಕ : ನಾಟಿ ಮಾಡೋರ್ಗೆಲ್ಲ
ನಾಟಿ ಕೋಳಿ ಸಾರು
ಕಟ್ಕೊಂಡೆಡ್ತೀಗೆ ಸಪ್ಪೆ ಸಾರು,
ಕಬ್ಬು ಕಡಿಯೋರ್ಗೆಲ್ಲ
ಕೊಬ್ಬಿದ್ ಕುರಿ ಸಾರು
ಬೇಯ್ಸಾಕೋ ನಂಗೆ ಬಸ್ಸಾರು,
ನನ್ ಗಂಡ ಊರ್ ಮುಂದೆ ದ್ವಾಡ್ ಮನ್ಸ
ಅರ್ತ ಮಾಡ್ಕೋಡಿದ್ರು ನನ್ ಮನ್ಸ !
ಪಾರಕ್ಕ : ಬತ್ತ ಬಡಿಯೋರ್ಗೆಲ್ಲ
ಬಿಟ್ಟಿ ಒಬ್ಬಿಟ್ಟು
ತಟ್ಟೋ ನಂಗೆ ಮಾತ್ರ ತಂಗ್ಳಿಟ್ಟು,
ರಾಗಿ ಬಿತ್ತೋರ್ಗೆಲ್ಲ
ಚಟ್ನಿ ಉಳಿಯನ್ನ
ರುಬ್ಬೋ ನಂಗೆ ಮೀಸ್ಲು ಅಳಸ್ಲನ್ನ,
ನನ್ ಗಂಡ ಊರ್ ಮುಂದೆ ದ್ವಾಡ್ ಮನ್ಸ
ಯೋಳ್ಕೋಳಾಕವ್ನೊಬ್ಬ ನರ್ ಮನ್ಸ !
ಸಿದ್ದಕ್ಕ : ಉಗಾದಿ ಅಬ್ಬುಕ್ಕೆ
ರವ್ಕೆ ಇಲ್ದಿದ್ರೂ
ಊರುನ್ ಮಾರಮ್ಮಂಗೆ ಸೀರೆ ಕೊಟ್ಟ
ನನ್ ಗಂಡ ಊರ್ ಮುಂದೆ ದ್ವಾಡ್ ಮನ್ಸ !
ಪಾರಕ್ಕ : ಅರ್ದೀರೋ ಚೆಡ್ದೀಗೆ
ವಲ್ಗೆ ಇಲ್ದಿದ್ರೂ ಕೆರೆ ಕಟ್ಟೋರ್ಗೆ ಕಾಸು ಕೊಟ್ಟ
ಅರ್ತ ಮಾಡ್ಕೋಡಿದ್ರು ನನ್ ಮನ್ಸ!
ಸಿದ್ದಕ್ಕ : ಪರ್ವಾಗಿಲ್ಲ ಪಾರಕ್ಕ
ಕ್ವಾಣೆ ವಳಕ್ ಬಾರಕ್ಕ
ಈ ಬಾಳಾಟ ಇಷ್ಟೇ ತಾನೆ !
ಪಾರಕ್ಕ:ನೀ ಸುಮ್ಮನಿರು ಸಿದ್ದಕ್ಕ
ನಾವೇನ್ ನಾಲಾಯಕ್ಕ
ಹೆಣ್ಣಿದ್ರೆ ಗಂಡು ತಾನೆ !
ಕ್ವಾಣೆ ವಳಕ್ ಬಾರಕ್ಕ
ನಾವೂನು ನಿಮ್ ಜನಾನೆ !
ಪಾರಕ್ಕ: ನೀ ಸುಮ್ಮನಿರು ಸಿದ್ದಕ್ಕ
ಗಮ್ಮನ್ನೋದೇನಕ್ಕ
ಏನ್ ಅಡುಗ್ಯೋ ಏನೋ ಕಾಣೆ !
ಸಿದ್ದಕ್ಕ : ಉಳ್ಳೀ ಕಾಳುರ್ದಿವ್ನಿ
ಮೆಣಸೇ ಕಾಯರ್ದಿವ್ನಿ
ಇಟ್ನೆಸ್ರೂದು ಮಡ್ಕೆ ಮಡಗಿವ್ನಿ
ನಿಮ್ಮಟ್ಟಿಲ್ ಏನೆಸ್ರು ಯೋಳು ನೀ ?
ಪಾರಕ್ಕ: ಗದ್ದೆ ಏರಿ ಮ್ಯಾಲೆ
ಇದ್ದ ಅಣ್ಣೆ ಸೊಪ್ಪು
ಎರ್ಡೇ ಎರಡೀರುಳ್ಳಿ ಎರಡಳ್ಳುಪ್ಪು
ಇದ್ದುದ್ದೇ ಬಕ್ಕ ನಾ ಏನೇಳ್ಳಿ !
ಸಿದ್ದಕ್ಕ : ನಾಟಿ ಮಾಡೋರ್ಗೆಲ್ಲ
ನಾಟಿ ಕೋಳಿ ಸಾರು
ಕಟ್ಕೊಂಡೆಡ್ತೀಗೆ ಸಪ್ಪೆ ಸಾರು,
ಕಬ್ಬು ಕಡಿಯೋರ್ಗೆಲ್ಲ
ಕೊಬ್ಬಿದ್ ಕುರಿ ಸಾರು
ಬೇಯ್ಸಾಕೋ ನಂಗೆ ಬಸ್ಸಾರು,
ನನ್ ಗಂಡ ಊರ್ ಮುಂದೆ ದ್ವಾಡ್ ಮನ್ಸ
ಅರ್ತ ಮಾಡ್ಕೋಡಿದ್ರು ನನ್ ಮನ್ಸ !
ಪಾರಕ್ಕ : ಬತ್ತ ಬಡಿಯೋರ್ಗೆಲ್ಲ
ಬಿಟ್ಟಿ ಒಬ್ಬಿಟ್ಟು
ತಟ್ಟೋ ನಂಗೆ ಮಾತ್ರ ತಂಗ್ಳಿಟ್ಟು,
ರಾಗಿ ಬಿತ್ತೋರ್ಗೆಲ್ಲ
ಚಟ್ನಿ ಉಳಿಯನ್ನ
ರುಬ್ಬೋ ನಂಗೆ ಮೀಸ್ಲು ಅಳಸ್ಲನ್ನ,
ನನ್ ಗಂಡ ಊರ್ ಮುಂದೆ ದ್ವಾಡ್ ಮನ್ಸ
ಯೋಳ್ಕೋಳಾಕವ್ನೊಬ್ಬ ನರ್ ಮನ್ಸ !
ಸಿದ್ದಕ್ಕ : ಉಗಾದಿ ಅಬ್ಬುಕ್ಕೆ
ರವ್ಕೆ ಇಲ್ದಿದ್ರೂ
ಊರುನ್ ಮಾರಮ್ಮಂಗೆ ಸೀರೆ ಕೊಟ್ಟ
ನನ್ ಗಂಡ ಊರ್ ಮುಂದೆ ದ್ವಾಡ್ ಮನ್ಸ !
ಪಾರಕ್ಕ : ಅರ್ದೀರೋ ಚೆಡ್ದೀಗೆ
ವಲ್ಗೆ ಇಲ್ದಿದ್ರೂ ಕೆರೆ ಕಟ್ಟೋರ್ಗೆ ಕಾಸು ಕೊಟ್ಟ
ಅರ್ತ ಮಾಡ್ಕೋಡಿದ್ರು ನನ್ ಮನ್ಸ!
ಸಿದ್ದಕ್ಕ : ಪರ್ವಾಗಿಲ್ಲ ಪಾರಕ್ಕ
ಕ್ವಾಣೆ ವಳಕ್ ಬಾರಕ್ಕ
ಈ ಬಾಳಾಟ ಇಷ್ಟೇ ತಾನೆ !
ಪಾರಕ್ಕ:ನೀ ಸುಮ್ಮನಿರು ಸಿದ್ದಕ್ಕ
ನಾವೇನ್ ನಾಲಾಯಕ್ಕ
ಹೆಣ್ಣಿದ್ರೆ ಗಂಡು ತಾನೆ !
ಭಾಷೆಯ ಬಳಕೆ ಚೆನ್ನಾಗಿದೆ!
ಪ್ರತ್ಯುತ್ತರಅಳಿಸಿಅಂತಿಮವಾಗಿ ನೀವು ಹೇಳುತ್ತಿರುವ ಮಾತನ್ನು ಮರುಪರಿಶೀಲಿಸಬಹುದು ಎನಿಸುತ್ತದೆ.
ನಮ್ಮಪ್ಪನ ಮನೆಯೇ ವಾಸಿ ಅನ್ನುವ ಬದಲು ನಮ್ಮ ಬದುಕನ್ನು ನಾವೇ ಕಟ್ಟಿಕೊಳ್ಳಬೇಕು, ಈ ಪುರುಷ ಪ್ರಧಾನ ವ್ಯವಸ್ಥೆಯಿಂದ ದೂರ ಉಳಿಯಬೇಕು ಎಂಬರ್ಥದ ಸಾಲು ಬಂದರೆ ಉತ್ತಮ.
ಆದರೂ... ಹೇಳ್ತೇನೆ! ಒಳ್ಳೆ ಪದ್ಯ ಅನಿಸಿಕೊಳ್ಳುವ ಸಾಧ್ಯತೆಗಳು ಈ ಪದ್ಯಕ್ಕಿದೆ!
ನಿಮ್ಮ ಮಾರ್ಗದರ್ಶನಕ್ಕೆ ಸದಾ ಸ್ವಾಗತ ಸರ್...ನಿಮ್ಮ ಪುಟ್ನಂಜ ಸಂಭಾಷಣೆಯ ಮುಂದೆ ನನ್ನ ಕವನ ಸೊನ್ನೆ ಅಂತ ಭಾವಿಸುತ್ತೇನೆ !
ಪ್ರತ್ಯುತ್ತರಅಳಿಸಿಗುರುವೇ<
ಪ್ರತ್ಯುತ್ತರಅಳಿಸಿಪುಟ್ನಂಜ ಯಾಕೆ ನೆನಪಿಸ್ತೀರಿ. ಅದು ಕಮರ್ಷಿಯಲ್ ಸಿನಿಮಾ ಸರ್ಕಸ್ಸು!
ನಿಮಗೆ ಸಾಧ್ಯವಾಗುವುದಾದರೆ ನನ್ನ ನಾಟಕಗಳನ್ನು ಓದಿ. ‘ಗಿರಿಜಾ ಕಲ್ಯಾಣ’ ನಾಟಕದಲ್ಲಿನ ಪ್ರಯೋಗ ‘ಪುಟ್ನಂಜ’ ಸಿನಿಮಾಗೆ ಹೋಲಿಸಿದರೆ ಅತ್ಯುತ್ತಮ. ಕುಂ.ವೀ ಮತ್ತು ಬೆಸಗರಹಳ್ಳಿ ರಾಮಣ್ಣನವರ ಭಾಷಾ ಪ್ರಯೋಗದ ಮುಂದೆ ನನ್ನ ಬರಹವನ್ನು ಇಡಲು ಸಹ ಆಗದು.
ಕಲಿಯುತ್ತಾ ಇದ್ದೇನೆ. ನೀವೂ ಒಂದಷ್ಟು ಕಲಿಸಿ.
ಈ ಗೀತೆ ರಜನಿಕಾಂತ ಚಿತ್ರದಲ್ಲಿ ರಚಿಸಿರುವುದು ನೀವೇನ..........???
ಪ್ರತ್ಯುತ್ತರಅಳಿಸಿಇಲ್ಲಿ ಇಸ್ಟು ಅರ್ತಗರ್ಬಿತ ಅನ್ಸೋ ಹಾಡು ಅಲ್ಲಿ ಅನರ್ತ ಅನಿಸ್ತಾ ಇರೋದು ನಮ್ ಚಿತ್ರರಂಗದ ಅಭಿರುಚಿ ತೋರಿಸ್ತಿರೋ ಹಾಗಿದೆ. ಚೆನ್ನಾಗಿದೆ ಸರ್.. ಚಿತ್ರ ಸಾಹಿತ್ಯನು ಹೀಗೇ ಇದ್ರೆ ಚೆನ್ನಾಗಿರುತ್ತೆ.. :)
ಪ್ರತ್ಯುತ್ತರಅಳಿಸಿಹಳ್ಳಿ ಹಾಡು ತಂದಾನನ
ಪ್ರತ್ಯುತ್ತರಅಳಿಸಿಹಳ್ಳಿ ಹಾಡು ತರನಾನನಾ
ಶಿವಾ
-ನವೀನ್ ಮರಳವಾಡಿ
ಕರ್ನಾಟಕ ಪ್ರೆಸ್‌ಕ್ಲಬ್ ಅಧ್ಯಕ್ಷರು
ಪತ್ರಕರ್ತ
ಅರ್ತಗರ್ಬಿತ ಕವನ .....
ಪ್ರತ್ಯುತ್ತರಅಳಿಸಿಮನೆಯ ಹೆಣ್ಣೈಕಳ್ ಕಥೆ ಯಾರಾಯಾರ್ ಬಲ್ಲೊರ್